• Home  
  • ಮಂಗಳೂರು: 7 ತಿಂಗಳ ಮಗುವಿನೊಂದಿಗೆ ತಾಯಿ ನಾಪತ್ತೆ
- DAKSHINA KANNADA - HOME - LATEST NEWS

ಮಂಗಳೂರು: 7 ತಿಂಗಳ ಮಗುವಿನೊಂದಿಗೆ ತಾಯಿ ನಾಪತ್ತೆ

ಮಂಗಳೂರು: ತನ್ನ 7 ತಿಂಗಳ ಮಗುವಿನೊಂದಿಗೆ ತಾಯಿಯು ನಾಪತ್ತೆಯಾದ ಬಗ್ಗೆ ಮಂಗಳೂರು ದಕ್ಷಿಣ ನಗರದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರಿನ ವಿವರ

ಸೆಲ್ವಿನ್‌ ಮಾಚಾದೋ ಅವರು ಇಂಟೀರಿಯರ್ ಡೆಕೊರೇಟರ್ ಆಗಿ ಕೆಲಸ ಮಾಡಿಕೊಂಡಿದ್ದು, ಕಳೆದೆರಡು ವರ್ಷಗಳಿಂದ   ಹೆಂಡತಿ ಬೆಲಿಂಡ ರೋಡ್ರಿಗಸ್ (30) ಮತ್ತು 7 ತಿಂಗಳ ಮಗ ಬ್ರೂಸ್ ಮಚಾಡೋ ಎಂಬುವವರ ಜೊತೆ ನಗರದ ಸೂಟರ್ ಪೇಟೆಯಲ್ಲಿ  ವಾಸವಾಗಿದ್ದರು.

ಆ.7 ರಂದು ಸೆಲ್ವಿನ್‌ ಮಾಚಾದೋ ಕೆಲಸ ನಿಮಿತ್ತ ಹೊರಹೋಗಿದ್ದರು. ಅದೇ ದಿನ ಸಂಜೆ 7 ಗಂಟೆಗೆ ಮನೆಗೆ ಬಂದು ನೋಡಿದಾಗ ಮಗುವಿನೊಂದಿಗೆ ತನ್ನ ಪತ್ನಿಯು ಮೂರು ಜನರ ಪಾಸ್ ಪೋರ್ಟ್ ತೆಗೆದುಕೊಂಡು ಹೇಳದೇ ಕೇಳದೇ ಮನೆಬಿಟ್ಟು  ನಾಪತ್ತೆಯಾಗಿದ್ದರು.  ಈ ಬಗ್ಗೆ ನೆರೆ ಮನೆಯವರಲ್ಲಿ ವಿಚಾರಿಸಿ ಸುತ್ತ ಮುತ್ತ ಪ್ರದೇಶಗಳಲ್ಲಿ ಹುಡುಕಾಡಿದರೂ ಆಕೆಯ ಬಗ್ಗೆ ಯಾವುದೇ ಮಾಹಿತಿ ತಿಳಿದಿರುವುದಿಲ್ಲ.

ಆದ್ದರಿಂದ ಕಾಣೆಯಾದ  ಪತ್ನಿ ಹಾಗೂ ಮಗುವನ್ನು ಪತ್ತೆಮಾಡಿಕೊಡುವಂತೆ ಮಂಗಳೂರು ದಕ್ಷಿಣ ನಗರದ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಕೆಳಕಂಡ ವ್ಯಕ್ತಿಗಳು ಸಿಕ್ಕಲ್ಲಿ ಕೂಡಲೇ ಸ್ಥಳೀಯ ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ.

ಕಾಣೆಯಾದವರ ಚಹರೆ ವಿವರ

ಹೆಸರು: ಬೆಲಿಂಡ ರೋಡ್ರಿಗಸ್, ಪ್ರಾಯ:30 ವರ್ಷ, ಎತ್ತರ: 5.5 ಅಡಿ, ಬಣ್ಣ:ಬಿಳಿ ಮೈ ಬಣ್ಣ, ಶರೀರ:ಸಾದಾರಣ ಮೈಕಟ್ಟು, ಕೂದಲು: ಕಪ್ಪು ಕೂದಲು, ಧರಿಸಿದ ಬಟ್ಟೆ; ಕೆಂಪು ಬಣ್ಣದ ಟೀ ಶರ್ಟ್ ಕಪ್ಪು ಬಣ್ಣದ ಪ್ಯಾಂಟ್  ಬಾಷೆ:ಪ್ರೆಂಚ್, ಹಿಂದಿ, ಇಂಗ್ಲೀಷ್  ಭಾಷೆ ಮಾತಡುತ್ತಾರೆ.

Share News

About Us

Lorem ipsum dol consectetur adipiscing neque any adipiscing the ni consectetur the a any adipiscing.

Email Us: [email protected]

Contact: +5-784-8894-678