ಮಂಗಳೂರು: ಬಾಲಯೇಸುವಿನ ಪುಣ್ಯಕ್ಷೇತ್ರ ಬಿಕರ್ನಕಟ್ಟೆಯಲ್ಲಿ ಏ.15 ರಿಂದ ನಿರಂತರ 40 ಗಂಟೆಗಳ ಆರಾಧನ ಸ್ತುತಿ ಏರ್ಪಡಿಸಲಾಗಿದೆ.
ಈ ಆರಾಧನ ಸ್ತುತಿಯು ಏ.15 ರಂದು ಮುಂಜಾನೆ 6 ಗಂಟೆಗೆ ಪವಿತ್ರ ಬಲಿಪೂಜೆಯ ಮೂಲಕ ಆರಂಭಗೊಳ್ಳಲಿದೆ. ನಂತರ 40 ಗಂಟೆಗಳ ನಿರಂತರ ಆರಾಧನ ಸ್ತುತಿ ನಡೆಯಲಿದೆ. ಇದರಲ್ಲಿ ಪೊಲೀಸ್ ಹಾಗೂ ಸೈನಿಕರಿಗಾಗಿ, ಶಿಕ್ಷಕರು, ದಿವ್ಯಾಂಗರು, ನನ ವಿವಾಹಿತ ಜೋಡಿ, ರೈತರು ಹೀಗೆ ಹತ್ತುವ ಹಲವರಿಗಾಗಿ ವಿಶೇಷ ಪ್ರಾರ್ಥನೆ ನಡೆಯಲಿದೆ.
ಈ ಆರಾಧನೆಯ ವಿಶೇಷತೆ ಎಂದರೆ ಮಕ್ಕಳಿಂದ ಆರಾಧನೆ, ಗುಮ್ಟಾ ಹಾಗೂ ಭಜನಾ ಸ್ತುತಿ ನಡೆಯಲಿದೆ. ಜೊತೆಗೆ ಸಂಗೀತ ವಾದ್ಯಗಳೊಂದಿಗೆ ಸ್ತುತಿ ಕಾರ್ಯಕ್ರಮ ನಡೆಯಲಿದೆ.
ವಿಶೇಷ ಪ್ರವಚನಗಳು
ಏ.15 ರ ರಾತ್ರಿ 9 ಗಂಟೆಯಿಂದ ಮುಂಜಾನೆಯವರೆಗೆ ವಂ. ಅಬ್ರಹಾಮ್, ವಂ. ಆಲ್ಬನ್ ಡಿಸೋಜ, ವಂ.ರಿಚರ್ಡ್ ಕ್ವಾಡ್ರಸ್ ಹಾಗೂ ವಂ. ರೋಮನ್ ಪಿಂಟೋ ಅವರಿಂದ ವಿಶೇಷ ಪ್ರವಚನಗಳು ನಡೆಯಲಿವೆ.
ಏ.16 ರಂದು ರಾತ್ರಿ 9 ಗಂಟೆಗೆ ನಿವೃತ್ತ ಧರ್ಮಾಧ್ಯಕ್ಷ ಅತೀ. ವಂ. ಲುವಿಸ್ ಪಾವ್ಲ್ ಸೋಜ್ ಅವರಿಂದ ಪವಿತ್ರ ಬಲಿಪೂಜೆಯ ಮೂಲಕ ಈ ಆರಾಧನ ಸ್ತುತಿ ಕೊನೆಗೊಳ್ಳಲಿದೆ ಎಂದು ಪುಣ್ಯಕ್ಷೇತ್ರದ ನಿರ್ದೇಶಕ ವಂ. ಫಾ. ಸ್ವೀವನ್ ಪಿರೇರಾ ಮಾಹಿತಿ ನೀಡಿದ್ದಾರೆ.