• Home  
  • ಕಳವಾರು ಸಂತ ಜೋಸೆಫರ ದೇವಾಲಯದಲ್ಲಿ ಮಾ. 31ಕ್ಕೆ 242ನೇ ಚಾರಿತ್ರಿಕ ‘ಪವಿತ್ರ ಶಿಲುಬೆಯ ಹಾದಿ’
- DAKSHINA KANNADA

ಕಳವಾರು ಸಂತ ಜೋಸೆಫರ ದೇವಾಲಯದಲ್ಲಿ ಮಾ. 31ಕ್ಕೆ 242ನೇ ಚಾರಿತ್ರಿಕ ‘ಪವಿತ್ರ ಶಿಲುಬೆಯ ಹಾದಿ’

ಮಂಗಳೂರು: ಪೆಜಾರ್ ವಲಯದ ಕಳವಾರು ಸಂತ ಜೋಸೆಫರ ದೇವಾಲಯದಲ್ಲಿ ಸುಮಾರು ಎರಡುವರೆ ಶತಮಾನಗಳ ಇತಿಹಾಸವಿರುವ ಪವಿತ್ರ ಶಿಲುಬೆಯ ಹಾದಿ ಕಾರ್ಯಕ್ರಮವು ಮಾರ್ಚ್ 31ರ ಮಂಗಳವಾರದಂದು ಅತ್ಯಂತ ಭಕ್ತಿಭಾವದಿಂದ ಜರುಗಲಿದೆ. ಇದು ಈ ಪವಿತ್ರ ಯಾತ್ರೆಯ 242ನೇ ವರ್ಷದ ಕಾರ್ಯಕ್ರಮವಾಗಿದ್ದು, ಈ ಬಾರಿ “ಯಾತನೆ ಪಡುವ ಪ್ರಭು ಕ್ರಿಸ್ತರ ಶರೀರವನ್ನು ಸ್ಪರ್ಶಿಸಲು ಯಾತ್ರಿಕ ಪಯಣ” ಎಂಬ ವಿಷಯದಡಿಯಲ್ಲಿ ನಡೆಯಲಿದೆ. ಎಂದು ಸಂತ ಜೋಸೆಫರ ಚರ್ಚ್ ಧರ್ಮಗುರು ವಂದನೀಯ ಡಾ. ರೊನಾಲ್ಡ್ ಡಿ ಸೋಜಾ, ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಮಾರ್ಚ್ 31 […]

Share News

ಮಂಗಳೂರು: ಪೆಜಾರ್ ವಲಯದ ಕಳವಾರು ಸಂತ ಜೋಸೆಫರ ದೇವಾಲಯದಲ್ಲಿ ಸುಮಾರು ಎರಡುವರೆ ಶತಮಾನಗಳ ಇತಿಹಾಸವಿರುವ ಪವಿತ್ರ ಶಿಲುಬೆಯ ಹಾದಿ ಕಾರ್ಯಕ್ರಮವು ಮಾರ್ಚ್ 31ರ ಮಂಗಳವಾರದಂದು ಅತ್ಯಂತ ಭಕ್ತಿಭಾವದಿಂದ ಜರುಗಲಿದೆ. ಇದು ಈ ಪವಿತ್ರ ಯಾತ್ರೆಯ 242ನೇ ವರ್ಷದ ಕಾರ್ಯಕ್ರಮವಾಗಿದ್ದು, ಈ ಬಾರಿ “ಯಾತನೆ ಪಡುವ ಪ್ರಭು ಕ್ರಿಸ್ತರ ಶರೀರವನ್ನು ಸ್ಪರ್ಶಿಸಲು ಯಾತ್ರಿಕ ಪಯಣ” ಎಂಬ ವಿಷಯದಡಿಯಲ್ಲಿ ನಡೆಯಲಿದೆ. ಎಂದು ಸಂತ ಜೋಸೆಫರ ಚರ್ಚ್ ಧರ್ಮಗುರು ವಂದನೀಯ ಡಾ. ರೊನಾಲ್ಡ್ ಡಿ ಸೋಜಾ, ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮಾರ್ಚ್ 31 ರಂದು ಮಂಗಳವಾರ ಬೆಳಗ್ಗೆ ಕಾರ್ಯ ಕ್ರಮ ಆರಂಭವಾಗುತ್ತದೆ. ಬೆಳಗ್ಗೆ 10 ಗಂಟೆಯಿಂದ ಅಪರಾಹ್ನ 3 ಗಂಟೆ ತನಕ ನಿರಂತರ ಪ್ರಾರ್ಥನೆ, ಸ್ತುತಿ ಆರಾಧನೆ ಮತ್ತು ದೇವರ ವಾಕ್ಯದ ಮನನ ಕಾರ್ಯ ಕ್ರಮ ನಡೆಯಲಿದೆ. ಮಂಗಳೂರು ಧರ್ಮ ಪ್ರಾಂತ್ಯದ ಕ್ಯಾರಿಸ್ಮಾಟಿಕ್ ಸಂಚಾಲನವು ಈ ಕಾರ್ಯಕ್ರಮವನ್ನು ನಡೆಸಿ ಕೊಡಲಿದೆ. 3 ಗಂಟೆಗೆ ದೇವರ ಕೃಪೆಯ ಭಕ್ತಿಯಾಚರಣೆ ನಡೆಯಲಿದೆ. 3.30 ಕ್ಕೆ ಪರಮ ಪವಿತ್ರ ಪ್ರಸಾದದ ಆರಾಧನೆ ನಡೆಯಲಿದ್ದು, ಆಂತರಿಕ ಆರೋಗ್ಯಕ್ಕಾಗಿ ಪ್ರಾರ್ಥನೆ ನಡೆಯುವುದು. ಇದನ್ನು ಮಂಗಳೂರು ಧರ್ಮ ಪ್ರಾಂತ್ಯದ ಕ್ಯಾರಿಸ್ಮಾಟಿಕ್ ಸಂಚಾಲನದ ನಿರ್ದೇಶಕ ವಂದನೀಯ ಫಾ. ಕ್ಲಿಫರ್ಡ್ ಫೆರ್ನಾಂಡಿಸ್ ಅವರು ನಡೆಸಿ ಕೊಡುವರು.ಸಂಜೆ 5 ಗಂಟೆಗೆ ಪವಿತ್ರ ಬಲಿಪೂಜೆ ನಡೆಯಲಿದೆ. ಸಂಜೆ 6 ಗಂಟೆಗೆ ಶಿಲುಬೆಯ ಹಾದಿ ಹಾಗೂ ಬಳಿಕ ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ್ಹಾ ಅವರಿಂದ ಪ್ರವಚನ ಇರುತ್ತದೆ. ರಾತ್ರಿ 9 ಗಂಟೆ ವೇಳೆಗೆ ಕಾರ್ಯಕ್ರಮ ಮುಕ್ತಾಯ ಗೊಳ್ಳುತ್ತದೆ. ಬಳಿಕ ವಿಶ್ವಾಸಿಗಳಿಗೆ ಊಟದ ವ್ಯವಸ್ಥೆ ಇರುತ್ತದೆ.
ಪಾದಯಾತ್ರೆ: ಈ ಚಾರಿತ್ರಿಕ ಕಾರ್ಯಕ್ರಮದ ಭಾಗವಾಗಿ ಪಾದ ಯಾತ್ರೆಯು ಅಪರಾಹ್ನ 2.45 ಕ್ಕೆ ಬಜಪೆ ಚೆಕ್ ಪೋಸ್ಟ್ ಬಳಿಯಿಂದ ಕಳವಾರು ಚರ್ಚ್ ಗೆ ಹಾಗೂ ಅಪರಾಹ್ನ 3.30 ಕ್ಕೆ ಜೋಕಟ್ಟೆ ಕೆಬಿಎಸ್ ನಿಂದ ಕಳವಾರು ಚರ್ಚ್ ಗೆ ನಡೆಯಲಿರುವುದು.
241 ವರ್ಷಗಳ ಹಿಂದೆ ವಿಭೂತಿಯ ಬುಧವಾರ ದಂದು ಈ ಚಾರಿತ್ರಿಕ ಶಿಲುಬೆಯ ಯಾತ್ರೆ ಕಾರ್ಯಕ್ರಮವನ್ನು ಆರಂಭಿಸಲಾಗಿತ್ತು.

ಪತ್ರಿಕಾಗೋಷ್ಠಿಯಲ್ಲಿ
ವಂದನೀಯ ಫಾ. ರುಡಾಲ್ಫ್ ರವಿ ಡೆಸಾ, ವಲಯ ಪ್ರಧಾನ ಗುರುಗಳು, ಪೇಜಾರ್ ವಲಯ
ಕ್ಲಿಫರ್ಡ್ ಡಿ ಸೋಜಾ, ಪಾಲನಾ ಸಮಿತಿಯ ಉಪಾಧ್ಯಕ್ಷರು, ಸಿಲ್ವಿಯಾ ಪೆರಿಸ್, ಕಾರ್ಯದರ್ಶಿ ಪಾಲನಾ ಸಮಿತಿ, ವಾಲ್ಟರ್ ಮೊಂತೇರೊ, ಸಿಲಾ
ಎಡ್ವರ್ಟೈಸರ್ಸ್, ಎಲಿಯಾಸ್ ಫೆರ್ನಾಂಡಿಸ್,
ಮಾಧ್ಯಮ ಸಲಹೆಗಾರ ಉಪಸ್ಥಿತರಿದ್ದರು

Share News