ವಿಟ್ಲ: ಪ್ರಸಿದ್ಧ ಶೋಕ ಮಾತಾ ಇಗರ್ಜಿಯಲ್ಲಿ ಇಂದು ‘ಗರಿಗಳ ಭಾನುವಾರ’ವನ್ನು (Palm Sunday) ಅತ್ಯಂತ ಭಕ್ತಿ-ಭಾವದಿಂದ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಚರ್ಚ್ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ 17 ಅಡಿ ಎತ್ತರದ ಬೃಹತ್ ಪವಿತ್ರ ಶಿಲುಬೆಯನ್ನು ಲೋಕಾರ್ಪಣೆಗೊಳಿಸಲಾಯಿತು.
ಚರ್ಚ್‌ನ ಧರ್ಮಗುರುಗಳಾದ ವಂದನೀಯ ಫಾ. ಐವನ್ ಮೈಕಲ್ ರೋಡ್ರಿಗಸ್ ಅವರು ನೂತನ ಶಿಲುಬೆಯನ್ನು ಆಶೀರ್ವದಿಸಿ, ಪ್ರತಿಷ್ಠಾಪನಾ ವಿಧಿವಿಧಾನಗಳನ್ನು ನೆರವೇರಿಸಿದರು.
ಬಳಿಕ ಗರಿಗಳ ಭಾನುವಾರದ ಪ್ರಯುಕ್ತ ವಿಶೇಷ ಬಲಿಪೂಜೆಯನ್ನು ನೆರವೇರಿಸಿ, ಯೇಸು ಕ್ರಿಸ್ತರು ಜೆರುಸಲೇಂ ಪ್ರವೇಶಿಸಿದ ಸ್ಮರಣಾರ್ಥ ಸಂದೇಶ ನೀಡಿದರು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ವಂದನೀಯ ಫಾ. ಅಮಿತ್ ಪ್ರಕಾಶ್ ರೋಡ್ರಿಗಸ್, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ವಲೇರಿಯನ್ ವೇಗಸ್, ಕಾರ್ಯದರ್ಶಿ ಸೆಲೆಸ್ತಿನ್ ಪಿಂಟೊ ಹಾಗೂ ಆಯೋಗಗಳ ಸಂಯೋಜಕಿ ಜಿಸಿಂತಾ ಫೆರ್ನಾಂಡಿಸ್ ಉಪಸ್ಥಿತರಿದ್ದರು. ವಿಟ್ಲ ಚರ್ಚ್ ವ್ಯಾಪ್ತಿಯ ನೂರಾರು ಕ್ರೈಸ್ತ ಬಾಂಧವರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು



















