ಸುಮಾರು ಹತ್ತು ವರ್ಷಗಳ ಹಿಂದೆ ಪೆರುವಾಯಿ ಚರ್ಚ್ ಗೆ ಧರ್ಮಗುರುಗಳಾಗಿ ನೇಮಕವಾಗಿ ಬಂದ Fr.Vishal monis ಅವರದು ವಿಶಿಷ್ಟ ವ್ಯಕ್ತಿತ್ವ. ಎಲ್ಲರನ್ನೂ ಸಮಾನವಾಗಿ ಕಾಣುವ, ಸಮುದಾಯದ ಬಡ ಕುಟುಂಬಗಳ ಉನ್ನತಿಗಾಗಿ ಅವಿರತ ಶ್ರಮಿಸುವ, ದೂರದರ್ಶಿತ್ವದ ಹಾಗೂ ಊಹೆಗೂ ನಿಲುಕದ ಸಾಮಾರ್ಥ್ಯ. ಒಡೆದು ಚೂರಾಗಿದ್ದ ಸಮುದಾಯದ ಜನರನ್ನು ಒಟ್ಟುಗೂಡಿಸಿ ಅವರಿಂದಲೇ ಬಡಕುಟುಂಬಗಳ ಮನೆ ರಿಪೇರಿ, ಚರ್ಚ್ ನ ಪುನರ್ನಿರ್ಮಾಣ ಮಾಡಿಸಿ ಹಾಗೂ ಜನ ಸಾಮಾನ್ಯರಿಗೂ ಉತ್ತಮ ವ್ಯವಸ್ಥೆ ಹೊಂದಿದ ಸಮುದಾಯದ ಭವನ ಸಿಗುವಂತೆ ಮಾಡುವ ದೊಡ್ಡ ಕನಸನ್ನು ಎಲ್ಲರ ಮನಸ್ಸಿನಲ್ಲಿ ಮೂಡಿಸಿದ ಮಹಾನುಭಾವ.
ಆರ್ಥಿಕ ಅಡಚಣೆ ಆಗದಂತೆ ಯೋಜನೆಗಳನ್ನು ಹಾಕಿಕೊಂಡರೂ ಅವರಿಗೆ ಎದುರಾದ ಸಂಕಷ್ಟ ಹಲವು. ಹೆದರದ, ಕುಗ್ಗದ ಎಲ್ಲದರಲ್ಲೂ positive ಮಾತ್ರ ಕಾಣುವ ಮನೋಭಾವ ಅವರದಾದ ಕಾರಣ ಎದೆಗುಂದದೆ ಎಲ್ಲ ಯೋಜನೆಗಳನ್ನೂ ಮುನ್ನಡೆಸಿದರು.
ವಿಟ್ಲದಲ್ಲಿ ಸಿವಿಲ್ ಇಂಜಿನಿಯರ್ ಆಗಿರುವ ನನಗೆ fr.Vishal ಒಡನಾಟ ಒದಗಿ ಬಂದದ್ದು ನನ್ನ ಜೀವನದ ಭಾಗ್ಯ ಎಂದು ಭಾವಿಸುತ್ತೇನೆ. ಗೊತ್ತಿಲ್ಲದ ವಿಷಯ ತಿಳಿದು ತನ್ನ ಅನುಭವವನ್ನು ಹಂಚಿಕೊಂಡು ವಿಮರ್ಶಿಸುವ ಗುಣ ಅಪರೂಪ. ನನ್ನಿಂದ ಅವರು ಪಡೆದ ಸಲಹೆಗಳಿಂದ ಹೆಚ್ಚು ಅವರಿಂದ ನಾನು ಕೇಳಿ ಕಲಿತಿದ್ದೇನೆ.
ಕಯ್ಯಾರು ಚರ್ಚ್ ಗೆ ಧರ್ಮಗುರುಗಳಾಗಿ ನೇಮಕವಾಗಿ ಹೋದ ಬಳಿಕವೂ ಹಲವು ಬಾರಿ ನಾನು ಅಲ್ಲಿಗೆ ಹೋಗಿದ್ದೇನೆ. ಹಳೆಯ Church ನವೀಕರಣದ ಬಗ್ಗೆ ನಮ್ಮ ಮಧ್ಯೆ ವಿಮರ್ಶೆಗಳು ನಡೆದಿವೆ. ನನ್ನ ಅನುಭವದ ಪ್ರಕಾರ ಅದು ತುಂಬ ವೆಚ್ಚ ತಗುಲುವ ಕೆಲಸ ಮತ್ತು ಮಾಡಿ ಪ್ರಯೋಜನ ಅಲ್ಪ ಎಂದು ಪ್ರತೀ ಬಾರಿಯೂ ನಾನು ಪ್ರತಿಪಾದಿಸಿದ್ದೆ.
ಹಳೇ ಮನೆ renovation ಕೆಲಸ ಹಲವು ಬಾರಿ ನಾನು ಮಾಡಿದ್ದೇನೆ. ಅಲ್ಲಿ ಎಲ್ಲ ಕೆಲಸ ಮುಗಿಸುವುದು ಎಂದು ಇಲ್ಲವೇ ಇಲ್ಲ. ಮುಗಿದರೂ ಅದರಲ್ಲಿ ಮಾಡಿಸಿದವನಿಗೆ ಸಮಾಧಾನ ಆಗುವುದು ಬಹಳ ವಿರಳ. ಅಷ್ಟಾಗಿಯೂ ಅದು ಕಟ್ಟಡದ ಸ್ಥಿರತೆಗೆ ಯಾವುದೇ ಪ್ರಯೋಜನ ಕೊಡುವುದಿಲ್ಲ. ಹೊಸ ಮನೆಯೇ ಕಟ್ಟಿ ಬಿಡಬಹುದಿತ್ತು ಎಂಬುದು ಸಾಮಾನ್ಯವಾಗಿ ಕೊನೆಗೆ ಬರುವ ಭಾವನೆ.
ಇಲ್ಲಿಯೂ ಅಷ್ಟೇ. ಹಳೇ Church building ಬಳಕೆಗೆ ಅಪಾಯಕಾರಿ ಅನಿಸಿ ಬೇರೆಯೇ ಚರ್ಚ್ ಕಟ್ಟುವುದೇ ಉತ್ತಮ ಎಂಬುದು ನಿರ್ಣಾಯಕ . ಅದೇ ರೀತಿ ಹಳೇ building ತೆಗೆದರೆ ಶಾಲೆ ಉಪಯೋಗಕ್ಕೆ ವಿಶಾಲ ಮೈದಾನ ದೊರಕಲಿ ಎಂಬುದೂ ಇನ್ನೊಂದು ಆಯಾಮದ ಯೋಚನೆ. ಅದರಲ್ಲಿ ಯಾವ ದುರುದ್ದೇಶದ ಪ್ರಶ್ನೆಯೇ ಉದ್ಭವಿಸುವುದಿಲ್ಲ.
ಹಾಗೆಂದು ಏಕಾಏಕಿ ಹಳೇ ಕಟ್ಟಡ ನಿರ್ನಾಮ ಮಾಡಲು ಆಗುವುದಿಲ್ಲ. ಹೊಸ ಕಟ್ಟಡ ರಚನೆಯೂ ಆಗುವುದಿಲ್ಲ. ಎಲ್ಲವೂ ಸಮಯ, ಆರ್ಥಿಕ ಹೊರೆ, ಹಲವು ಜನರ ಸಹಕಾರ, ಶ್ರಮ ತಗುಲುವ ಕೆಲಸ. ಎಲ್ಲವೂ ಒಂದಾದ ನಂತರವೇ ಒಂದು ಆಗುತ್ತಿದೆ.
ದೇವರ ಇಚ್ಛೆ ಇಲ್ಲದೆ ಒಂದು ಹುಲ್ಲು ಕಡ್ಡಿಯೂ ಅಲುಗಾಡದು ಎಂಬುದು ಶಾಸ್ತ್ರ ಸಮ್ಮತ. ಅವನಿಗೆ ಏನು ಬೇಕೋ ಅದನ್ನು ದೇವರೇ ನಮ್ಮ ಬಳಿ ಮಾಡಿಸುತ್ತಾನೆ. ಆಗುವುದೆಲ್ಲ ಒಳ್ಳೆಯದ್ದಕ್ಕೆ ಆಗಿದೆ. ಮುಂದೆ ಆಗುವುದು ಒಳ್ಳೆಯದೇ ಆಗಿರುತ್ತದೆ. ವಿನಾಕಾರಣ ಅನಗತ್ಯ ಸಂಗತಿಗಳನ್ನು ಪ್ರಸ್ತಾಪಿಸಿ ಅಭಿವೃದ್ಧಿ ಕೆಲಸಗಳಿಗೆ ಅಡ್ಡಿ ಮಾಡುವ ಸರ್ವರಿಗೂ ದೇವರು ಸದ್ಭುದ್ಧಿ ನೀಡಲಿ ಎಂಬುದೇ ನನ್ನ ಪ್ರಾರ್ಥನೆ.
– Radhakrishna muliya, Consulting civil engineer, Vittal. Mob : 7411374471
–
ಸುಮಾರು ಹತ್ತು ವರ್ಷಗಳ ಹಿಂದೆ ಪೆರುವಾಯಿ ಚರ್ಚ್ ಗೆ ಧರ್ಮಗುರುಗಳಾಗಿ ನೇಮಕವಾಗಿ ಬಂದ Fr.Vishal monis ಅವರದು ವಿಶಿಷ್ಟ ವ್ಯಕ್ತಿತ್ವ. ಎಲ್ಲರನ್ನೂ ಸಮಾನವಾಗಿ ಕಾಣುವ, ಸಮುದಾಯದ ಬಡ ಕುಟುಂಬಗಳ ಉನ್ನತಿಗಾಗಿ ಅವಿರತ ಶ್ರಮಿಸುವ, ದೂರದರ್ಶಿತ್ವದ ಹಾಗೂ ಊಹೆಗೂ ನಿಲುಕದ ಸಾಮಾರ್ಥ್ಯ. ಒಡೆದು ಚೂರಾಗಿದ್ದ ಸಮುದಾಯದ ಜನರನ್ನು ಒಟ್ಟುಗೂಡಿಸಿ ಅವರಿಂದಲೇ ಬಡಕುಟುಂಬಗಳ ಮನೆ ರಿಪೇರಿ, ಚರ್ಚ್ ನ ಪುನರ್ನಿರ್ಮಾಣ ಮಾಡಿಸಿ ಹಾಗೂ ಜನ ಸಾಮಾನ್ಯರಿಗೂ ಉತ್ತಮ ವ್ಯವಸ್ಥೆ ಹೊಂದಿದ ಸಮುದಾಯದ ಭವನ ಸಿಗುವಂತೆ ಮಾಡುವ ದೊಡ್ಡ ಕನಸನ್ನು ಎಲ್ಲರ […]

