• Home  
  • ಮಾ. 20- 23: ಮಂಗಳೂರಿನಲ್ಲಿ ಬೈಬಲ್ ಮಹಾ ಸಮ್ಮೇಳನ
- COMMUNITY NEWS - HOME - LATEST NEWS

ಮಾ. 20- 23: ಮಂಗಳೂರಿನಲ್ಲಿ ಬೈಬಲ್ ಮಹಾ ಸಮ್ಮೇಳನ

ಮಂಗಳೂರು: ಕ್ರಿಸ್ತ ಜಯಂತಿ – 2025 ಜ್ಯುಬಿಲಿ ವರ್ಷ ಹಾಗೂ ಕ್ಯಾರಿಸ್ಮಾಟಿಕ್‌ ಸೇವಾ ಸಂಚಾಲನದ ಸುವರ್ಣ ಮಹೋತ್ಸವದ ಅಂಗವಾಗಿ ಬೈಬಲ್ ಮಹಾ ಸಮ್ಮೇಳನವು ಮಾರ್ಚ್ 20 ರಿಂದ 23 ರ ತನಕ ಮಂಗಳೂರಿನ ಕುಲಸೇಖರದ ಕೋರ್ಡೆಲ್ ಹೋಲಿ ಕ್ರಾಸ್‌ ಚರ್ಚ್‌ನ ತೆರೆದ ಮೈದಾನದಲ್ಲಿ ಪ್ರತಿ ದಿನ ಸಂಜೆ 4 ರಿಂದ ರಾತ್ರಿ 8.30 ರ ತನಕ ನಡೆಯಲಿದೆ ಎಂದು ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂದನೀಯ ಡಾ. ಪೀಟರ್‌ ಪಾವ್ಲ್ ಸಲ್ಡಾನ್ಹಾ ಅವರು ತಿಳಿಸಿದ್ದಾರೆ. ಈ […]

Share News

ಮಂಗಳೂರು: ಕ್ರಿಸ್ತ ಜಯಂತಿ – 2025 ಜ್ಯುಬಿಲಿ ವರ್ಷ ಹಾಗೂ ಕ್ಯಾರಿಸ್ಮಾಟಿಕ್‌ ಸೇವಾ ಸಂಚಾಲನದ ಸುವರ್ಣ ಮಹೋತ್ಸವದ ಅಂಗವಾಗಿ ಬೈಬಲ್ ಮಹಾ ಸಮ್ಮೇಳನವು ಮಾರ್ಚ್ 20 ರಿಂದ 23 ರ ತನಕ ಮಂಗಳೂರಿನ ಕುಲಸೇಖರದ ಕೋರ್ಡೆಲ್ ಹೋಲಿ ಕ್ರಾಸ್‌ ಚರ್ಚ್‌ನ ತೆರೆದ ಮೈದಾನದಲ್ಲಿ ಪ್ರತಿ ದಿನ ಸಂಜೆ 4 ರಿಂದ ರಾತ್ರಿ 8.30 ರ ತನಕ ನಡೆಯಲಿದೆ ಎಂದು ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂದನೀಯ ಡಾ. ಪೀಟರ್‌ ಪಾವ್ಲ್ ಸಲ್ಡಾನ್ಹಾ ಅವರು ತಿಳಿಸಿದ್ದಾರೆ.


ಈ ಪ್ರಾರ್ಥನಾ ಸಭೆಯಲ್ಲಿ ಬಲಿ ಪೂಜೆ, ಪರಮ ಪ್ರಸಾದದ ಆರಾಧನೆ, ಪ್ರವಚನ ಮತ್ತು ವಿಶೇಷ ಪ್ರಾರ್ಥನಾ ವಿಧಿ ಇರಲಿದ್ದು, ಕೇರಳದ ಆನಕ್ಕರ ಮೇರಿಯನ್‌ ರಿಟ್ರೀಟ್‌ ಸೆಂಟರಿನ ನಿರ್ದೇಶಕ ವಂದನೀಯ ಫಾದರ್‌ ಡೊಮಿನಿಕ್‌ ನಲಮನಲ್‌ ಅವರು ವಿಶೇಷ ಪ್ರಬೋಧನೆ ನೀಡಲಿದ್ದಾರೆ ಎಂದು ಪ್ರತಿಕಾ ಪ್ರಕಟನೆ ತಿಳಿಸಿದೆ.

Share News