• Home  
  • ಮಂಗಳೂರು ಧರ್ಮಪ್ರಾಂತ್ಯದ ಮೆಗಾ ಬೈಬಲ್ ಸಮ್ಮೇಳನ ಸಮರೋಪ
- COMMUNITY NEWS - LATEST NEWS

ಮಂಗಳೂರು ಧರ್ಮಪ್ರಾಂತ್ಯದ ಮೆಗಾ ಬೈಬಲ್ ಸಮ್ಮೇಳನ ಸಮರೋಪ

ಮಂಗಳೂರು: ಮಂಗಳೂರು ಧರ್ಮಪ್ರಾಂತ್ಯದ ಸೇವಾ ಕಮ್ಯುನಿಯನ್ (MDSC) ಮತ್ತು ಬೈಬಲ್ ಆಯೋಗವು ಮಂಗಳೂರಿನ ಕಾರ್ಡೆಲ್ ಹೋಲಿ ಕ್ರಾಸ್ ಚರ್ಚ್‌ ಮೈದಾನದಲ್ಲಿ ಆಯೋಜಿಸಿದ ನಾಲ್ಕು ದಿನದ ಮೆಗಾ ಬೈಬಲ್ ಸಮಾವೇಶವು ಫೆಬ್ರವರಿ 25 ರಂದು ತೆರೆಕಂಡಿತು. ಸರಿಸುಮಾರು 10,000 ಭಕ್ತಾದಿಗಳು ಅವರ ಕುಟುಂಬಗಳೊಂದಿಗೆ ಹಾಜರಿದ್ದು ಆಧ್ಯಾತ್ಮಿಕ ಬೆಳವಣಿಗೆ ಮತ್ತು ಸಾಮುದಾಯಿಕ ನವೀಕರಣಕ್ಕೆ ಸಾಕ್ಷಿಯಾದರು.


ಕೇರಳದ ಡಿವೈನ್ ರಿಟ್ರೀಟ್ ಸೆಂಟರ್‌ನಿಂದ ರೆ.ಫಾ. ಜೋಸೆಫ್ ಎಡಟ್ಟು ವಿ.ಸಿ. ಅವರ ಮಾರ್ಗದರ್ಶನದಲ್ಲಿ ನಡೆದ ಈ ಸಮಾವೇಶನದಲ್ಲಿ ದೇವರ ಸ್ತುತಿ ಸ್ತೋತ್ರ, ವಿಮೋಚನೆಯ ಪ್ರಾರ್ಥನೆಗಳು, ಸಾಮೂಹಿಕ ಪೂಜೆ- ಆರಾಧನೆ ಗಳಿಂದ ಕೂಡಿದ್ದು ಉಅಶಸ್ವಿಯಾಗಿ ಕೊನೆಗೊಂಡಿತು.


MDSCಯ ಸಂಯೋಜಕರಾದ ಕೆವನ್ ಡಿಸೋಜಾ ಅವರ ನೇತೃತ್ವದ ಸ್ತುತಿ-ಸ್ತೋತ್ರ ಮತ್ತು ಆರಾಧನಾ ಅಧಿವೇಶನದೊಂದಿಗೆ ದಿನವು ಪ್ರಾರಂಭವಾಯಿತು. ರೋನಿ ಡಿಸೋಜಾ ಮತ್ತು ಸಂಗಡಿಗರು ಸುಮಧುರ ಕಂಠದಿಂದ ದೇವರನ್ನು ಸ್ತುತಿಸಿದರು.


ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಬಿಷಪ್ ವಂದನೀಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಅವರು ಮಹಾ ಬಲಿಪೂಜೆಯ ಅರ್ಪಿಸಿದರು. ಕಾರ್ಡೆಲ್ ಚರ್ಚ್‌ನ ಧರ್ಮಗುರು ಮತ್ತು MDSCಯ ಆಧ್ಯಾತ್ಮಿಕ ನಿರ್ದೇಶಕ ಕ್ಲಿಫರ್ಡ್ ಫೆರ್ನಾಂಡಿಸ್, “ನಾವು ರೂಪಾಂತರಗೊಳ್ಳಲು ರಚಿಸಲ್ಪಟ್ಟಿದ್ದೇವೆ ಮತ್ತು ಕರೆಯಲ್ಪಟ್ಟಿದ್ದೇವೆ” ಎಂಬ ವಿಷಯದ ಮೇಲೆ ಧರ್ಮೋಪದೇಶವನ್ನು ನೀಡುತ್ತಾ ಭಗವಂತನಲ್ಲಿ ಧೃಡ ನಂಬಿಕೆ ಮತ್ತು ದೇವರ ವಾಕ್ಯದ ಅನುಸರಣೆ ಕುಟುಂಬ ಜೀವನದಲ್ಲಿ ನವೀಕರಣ ತರಲು ಸಾಧ್ಯ ಎಂದು ಹೇಳಿದರು.

ರೆ.ಫಾ.ಎಡಟ್ಟು ವಿ.ಸಿ. ದೇವರ ವಾಕ್ಯದ ಮೇಲೆ ಪ್ರವಚನೆ ಮತ್ತು ವಿಮೋಚನೆ ಪ್ರಾರ್ಥನೆ ನಡೆಸಿ ಭಕ್ತರನ್ನು ಆಳವಾಗಿ ದೇವರಲ್ಲಿ ಸೆಳೆಯುವಲ್ಲಿ ಪ್ರೇರಣಾದಾಯಕಾರಾದರು.
ರೆ.ಫಾ.ಎಡಟ್ಟು ಅವರಿಗೆ ಫಾದರ್ ಆಂಡ್ರ್ಯು ಡಿಸೋಜಾ ಮತ್ತು ಫಾ ಜೋಸೆಫ್ ಮಾರ್ಟಿಸ್ ಭಾಷಾಂತರಕಾರರಾಗಿದ್ದರು.

ಕೊನೆಯಲ್ಲಿ, ಕುಟುಂಬ ನವೀಕರಣಕ್ಕೆ ವಿಶೇಷ ಪ್ರಾರ್ಥನೆ ನಡೆಯಿತು.
“MDSCಯ ಮುಂಬರುವ ಕಾರ್ಯಕ್ರಮಗಳು ಮತ್ತು ಅದರ ಇತಿಹಾಸವು www.ccrmangalore.in ನಲ್ಲಿ ಲಭ್ಯವಿರುತ್ತದೆ” ಎಂದು ಸಂಯೋಜಕರಾದ ಶ್ರೀ ಕೆವನ್ ಹೇಳಿದರು.

Share News

About Us

Lorem ipsum dol consectetur adipiscing neque any adipiscing the ni consectetur the a any adipiscing.

Email Us: [email protected]

Contact: +5-784-8894-678