ನವದೆಹಲಿ: ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ 10 ಗ್ರಾಂ ಚಿನ್ನದ ಬೆಲೆ ರೂ.700 ಏರಿಕೆಯಾಗಿ, ಸಾರ್ವಕಾಲಿಕ ರೂ. 91,950 ಆಗಿದೆ ಎಂದು ಅಖಿಲ ಭಾರತ ಸರಾಫ್ ಸಂಘ ತಿಳಿಸಿದೆ.
ಇದಲ್ಲದೇ ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ ಉದ್ವಿಗ್ನತೆ ಮತ್ತು ಅಮೆರಿಕದ ಆರ್ಥಿಕ ಕುಸಿತವೂ ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ. ಶುದ್ಧ ಚಿನ್ನದ ಬೆಲೆ 10 ಗ್ರಾಂಗೆ 700 ರೂ. ಏರಿಕೆಯಾಗಿದ್ದು, 91, 950 ರೂ. ಆಗಿದೆ. ಮಂಗಳವಾರ 10 ಗ್ರಾಂ ಚಿನ್ನದ ಬೆಲೆ ರೂ.91, 250 ಆಗಿತ್ತು.
ಚಿನ್ನದ ಬೆಲೆ 10 ಗ್ರಾಂಗೆ 700 ರೂ. ಏರಿಕೆಯಾಗಿದ್ದು, 91, 950 ರೂ. ಆಗಿರುವುದು ಸಾರ್ವಕಾಲಿಕ ದಾಖಲೆಯಾಗಿದೆ.
ಈ ವರ್ಷದಲ್ಲಿ ಗರಿಷ್ಟ ಮಟ್ಟದ ಏರಿಕೆ: ಹಬ್ಬಗಳು, ಮದುವೆ ಸೀಸನ್ ಆಗಿರುವುದರಿಂದ ಗ್ರಾಹಕರು ಚಿನ್ನ ಖರೀದಿಯಲ್ಲಿ ತೊಡಗಿರುವುದು ಮತ್ತು ಸಾಗರೋತ್ತರ ಮಾರುಕಟ್ಟೆಗಳಲ್ಲಿನ ಪ್ರವೃತ್ತಿಯು ಚಿನ್ನದ ಬೆಲೆಯನ್ನು ಈ ವರ್ಷದಲ್ಲಿ ಗರಿಷ್ಠ ಮಟ್ಟಕ್ಕೆ ಏರಿಸಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.